ದಕ್ಷಿಣ ಕನ್ನಡಿಗರ ಸಾಂಸ್ಕೃತಿಕ ಸಂಘದ ಇತಿಹಾಸ
1995 ರಲ್ಲಿ ಯಲಹಂಕ ಸುತ್ತಮುತ್ತಲಿನ ದಕ್ಷಿಣ ಕನ್ನಡಿಗರ ಕುಟುಂಬಗಳನ್ನು ಒಟ್ಟುಗೂಡಿಸಿ ಜಾತಿ, ಧರ್ಮ, ಭಾಷೆ ಭೇಧವಿಲ್ಲದೆ ನಮ್ಮ ನಾಡಿನ ಕಲೆ, ಸಂಸ್ಕೃತಿ, ಆಚಾರ, ವಿಚಾರ ಮತ್ತು ಇತರೆ ವೈಶಿಷ್ಟ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಸಲುವಾಗಿ ಸಾಂಸ್ಕೃತಿಕ ಸಂಘವನ್ನು ಸ್ಥಾಪಿಸಿದರು. 1996 ರಲ್ಲಿ ಸಂಘವನ್ನು ನೋಂದಾಯಿಸಿಲಾಯಿತು.
ಸ್ಥಾಪಕ ಅಧ್ಯಕ್ಷರಾದ ಶ್ರೀಯುತ ಕೆ ವಿಠಲ್ ಶೆಟ್ಟಿ ಇವರ ನೇತೃತ್ವದಿಂದ ಶ್ರೀಯುತ ಸುಧಾಕರ ಶೆಟ್ಟಿ, ಜೀನೇಂದ್ರ ಕುಮಾರ್ ಜೈನ್, ಸುಮಿತ್ರ ವಿ. ಶೆಟ್ಟಿ, ಶೇಖರ್ ಶೆಟ್ಟಿ, ಸದಾಶಿವ ರೈ, ಸೀತಾರಾಮ ಶೆಟ್ಟಿ, ದಯಾನಂದ .ಸಿ, ಕೊಟ್ವಾನ್, ಮೈಕಲ್ ಗೋಮ್ಸ್, ಪೃಥಿವರಾಜ ಬೇಕಲ್, ದೇವಪ್ಪ ಪೂಜಾರಿ, ವಿಠಲ ಗೌಡ, ಅಶೋಕ ಹೆಗ್ಡೆ, ರವೀಂದ್ರ ಶೆಟ್ಟಿ, ಕೃಷ್ಣ ಪ್ರಸಾದ್, ಉದಯ ಹೆಗ್ದೆ, ಅಣ್ಣಪ್ಪ, ಪ್ರವೀಣ ಸುಂದರ್ ಅನಂತ ಕೃಷ್ಣ, ಚನ್ನಕೇಶವ, ಶ್ರೀಕಾಂತ ನಾಯ್ಕ ಹಾಗೂ ಇತರರ ಪರಿಶ್ರಮದಿಂದ ದಿನಾಂಕ: 01-10-1995 ರಂದು ಉದ್ಘಾಟನೆಗೊಂಡಿತು.
ದ್ವಿಶತಕವನ್ನು ಪೊರೈಸುತಿರುವ ನಮ್ಮ ಸಂಘದ ಸ್ಥಾಪನೆ ಹಾಗು ಬೆಳವಣಿಗೆಯ ಹಿಂದೆ ಅನೇಕ ಹಿರಿಯರ ಕೊಡುಗೆ ಅಪಾರ. ಇವರಲ್ಲಿ ಪ್ರಮುಖರು ದಿ|| ಡಾ|| ಕರುಣಾಕರ ಶೆಟ್ಟಿ, ರಾಜ್ ಬಲ್ಲಾಳ್, ದಯಾನಂದ ಪೈ, ಗೋವಿಂದೂರು,ವೆಂಕಪ್ಪ ಹೆಗ್ಡೆ, ಸುಧಾಕರ ಶೆಟ್ಟಿ, ಯಶವಂತ ನಾಯಕ್, ಶೇಖರ ಪೂಜಾರಿ – ಮುಂತಾದವರ ಧನ ಸಹಾಯ ಮತ್ತು ಸಲಹೆ ಸಹಕಾರಗಳಿಂದ ಸಂಘವು ಸಾಗಿಕೊಂಡು ಬಂದಿದೆ.
ಎರಡನೇ ಆವರ್ತಿಗಾಗಿ ಶ್ರೀಯುತ ಆನಂದ ಶೆಟ್ಟರ ಅಧ್ಯಕ್ಷತೆಯಲ್ಲಿ, ಯಶೋಧರ ಎಸ ರಾವ್,ಪ್ರಥ್ವಿರಾಜ್ ಬೇಕಲ್, ಜಯರಾಮ ಶೆಟ್ಟಿ, ಸುಮಿತ್ರ.ವಿ.ಶೆಟ್ಟಿ, ಸದಾಶಿವ ಶೆಟ್ಟಿ ದಿವಾಕರ ಶೆಟ್ಟಿ, ರತನ್ ಕುಮಾರ್ ಹೆಗ್ಡೆ, ರವೀಂದ್ರ ಶೆಟ್ಟಿ, ನವೀನ ಕುಮಾರ್, ಜಾನ್ ಡಿಸೋಜಾ, ಡಾ.ಗಣೇಶ್ ಆಚಾರ್, ಚಂದ್ರಿಕಾ ಚೆನ್ನಕೇಶವ, ಮೈಕಲ್ ಗೋಮ್ಸ್, ಎ.ಜಯರಾಮ ಶೆಟ್ಟಿ, ಬಿ.ಸ್.ಪ್ರವೀಣ್ ಕುಮಾರ್.
ಮೂರನೇ ಆವರ್ತಿಗಾಗಿ ಶ್ರೀಯುತ ಲಕ್ಷ್ಮೀ ನಾರಾಯಣ ಆಳ್ವರ ಅಧ್ಯಕ್ಷತೆಯಲ್ಲಿ ಡಾ. ಗಣೇಶ ಆಚಾರ್, ದಯಾನಂದ.ಸಿ.ಕೋಟ್ಯಾನ್, ನವೀನ ಕುಮಾರ್, ಚೇತನ್ ಶೆಟ್ಟಿ,ಸುಮಲತಾ ಭಂಡಾರಿ, ಕಮಲಾಕ್ಷ.ಎಲ್.ಕುಂದರ್,ಸುಮಿತ್ರ ವಿ ಶೆಟ್ಟಿ,ರಾಜೇಶ್ ಪುತ್ರನ್, ಎ.ಜಯರಾಮ ಶೆಟ್ಟಿ, ಬಿ.ರಘುನಾಥ ರೈ, ಜೆ.ವಿಲಿಯಂ ಡಿಸೋಜಾ, ಎಸ.ಎಸ.ಪೈ, ಪರೀಕ ಭಾಸ್ಕರ ಶೆಟ್ಟಿ, ಗಣೇಶ್ ಕೋಟ್ಯಾನ್,ಉದಯ ಶೆಟ್ಟಿ, ರಾಜು ದೇವಾಡಿಗ.
ನಾಲ್ಕನೇ ಆವರ್ತಿಗಾಗಿ ಶ್ರೀಯುತ ಲಕ್ಷ್ಮೀ ನಾರಾಯಣ ಆಳ್ವರ ಅಧ್ಯಕ್ಷರಾಗಿ,, ಎಂ ಬಾಲಕೃಷ್ಣ ರೈ, ದಯಾನಂದ.ಸಿ.ಕೋಟ್ಯಾನ್, ಪ್ರಭಾ ಸಿ ಹೊಳ್ಳ, ಡಿ.ಆನಂದ ಗೌಡ, ಬಿ.ರಘುನಾಥ್ ರೈ, ಸುಮಿತ್ರ ವಿ ಶೆಟ್ಟಿ,ಉದಯ ಹೆಗ್ಡೆ, ಎ.ಜಯರಾಮ ಶೆಟ್ಟಿ, ಎಂ.ಶಿವಪ್ಪ, ಭಾಸ್ಕರ ಶೆಟ್ಟಿ, ಕಮಲಾಕ್ಷ.ಎಲ್.ಕುಂದರ್, ಚನ್ನಕೇಶವ, ಜಾನ್ ವಿಲಿಯಮ್ ಡಿಸೋಜ಼, ಶಶಿಕಾಂತ ಕುಮಾರ್ ಶೆಟ್ಟಿ, ಸತೀಶ್ ಕಾಮತ್.
5ನೇ ಆವರ್ತಿಗಾಗಿ ಶ್ರೀಯುತ ಪರೀಕ ಭಾಸ್ಕರ ಶೆಟ್ಟರು ಅಧ್ಯಕ್ಷರಾಗಿ, ಶೇಖರ ಶೆಟ್ಟಿ, ಉದಯರಾಜ ಜೈನ್, ಬಿ. ಕೃಷ್ಣಕುಮಾರ ಹೆಗ್ಡೆ, ಕೆ. ಭಾಸ್ಕರ ಶೆಟ್ಟಿ, ಶ್ರೀಮತಿ ಸುಮಿತ್ರ ವಿ ಶೆಟ್ಟಿ,ಉದಯ ಹೆಗ್ದೆ, ಅರವಿಂದ ರಾವ್, ರಾಜೇಶ್ ಪುತ್ರನ್, ಶ್ರೀಮತಿ ಸುರೇಖ ಎಸ್ ಶೆಟ್ಟಿ, ಸೀತಾರಾಮ ಶೆಟ್ಟಿ, ಶ್ರೀಮತಿ ರೇವತಿ ಎಸ್ ಕಾಮತ್, ಪದ್ಮನಾಭ ಬಿ, ಶ್ಯಾಮ್ ಪ್ರಸಾದ, ಪ್ರವೀಣ ಕುಮಾರ ಸುಂದರ್, ಹರೀಶ ಎನ್ ಇವರುಗಳು ಸಂಘವನ್ನು ಮುನ್ನಡೆಸಿದ್ದಾರೆ.
ಪ್ರಸ್ತುತ ಶ್ರೀಯುತ ದಯಾನಂದ ಸಿ. ಕೋಟ್ಯಾನ್ ಅಧ್ಯಕ್ಷರಾಗಿ, ಪದಾಧಿಕಾರಿಗಳು ಹಾಗು ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ, ಶ್ರೀಮತಿ ಚಿತ್ರಕಲಾ ರಘುನಾಥ್ ರೈ – ಪ್ರಧಾನ ಕಾರ್ಯದರ್ಶಿ, ಎ. ಜಯರಾಂ ಶೆಟ್ಟಿ-ಕೋಶಾಧಿಕಾರಿ, ಶ್ರೀ ಎ. ಬಿ. ಶೆಟ್ಟಿ- ಉಪಾಧ್ಯಕ್ಷರು, ಶ್ರೀ ಶ್ರೀನಿವಾಸ್ ಶೆಟ್ಟಿ- ಸಂಘಟನ ಕಾರ್ಯದರ್ಶಿ , ಶ್ರೀಮತಿ ಮಲ್ಲಿಕಾ ಲಕ್ಷ್ಮಿನಾರಾಯಣ ಆಳ್ವ- ಉಪಾಧ್ಯಕ್ಷರು ( ಮ.ವಿ), ಶ್ರೀ ಎ. ಎಂ. ರೈ- ಲೆಕ್ಕ ಪರಿಶೋಧಕರು, ಶ್ರೀ ಅರವಿಂದ ರಾವ್-ಜಂಟಿ ಕಾರ್ಯದರ್ಶಿ , ಶ್ರೀ ಸತೀಶ್ ಶೆಟ್ಟಿ – ಸಾಂಸ್ಕೃತಿಕ ಕಾರ್ಯದರ್ಶಿ , ಶ್ರೀಮತಿ ಪ್ರತಿಮಾ ಗಣೇಶ್ ಆಚಾರ್- ಸಾಂಸ್ಕೃತಿಕ ಕಾರ್ಯದರ್ಶಿ ( ಮ ವಿ). ಶ್ರೀ ಮೋಹನ್ ರಾಂ ಹೆಗ್ಡೆ ಬಿ, ಶ್ರೀ ಕೆ. ಸುದರ್ಶನ್ ಪೈ,ಶ್ರೀ ಹರೀಶ ಶೆಟ್ಟಿ, ಶ್ರೀ ಜಾನ್ ವಿಲಿಯಮ್ ಡಿಸೋಜ಼,ಶ್ರೀ ಸುಧೀರ್ ಶೆಟ್ಟಿ, ಶ್ರೀ ದಿನಕರ್ ಸುವರ್ಣ, ಶ್ರೀ ಸುನೀಲ್ ಕೋಟ್ಯಾನ್. ಇವರುಗಳು ಸಂಘವನ್ನು ಮುನ್ನಡೆಸುತ್ತಿದ್ದಾರೆ.
ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಕರ್ನಾಟಕ ಸರ್ಕಾರ ಇದರ ಸಹಯೋಗದಿಂದ ಸಂಘವು ಕಲಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ವರ್ಷಂಪ್ರತಿಯಾಗಿ ನಡೆಸಿಕೊಂಡು ಬಂದಿದೆ.
ರೋಟರಿ ಕ್ಲಬ್ ಸಹಯೋಗದೊಂದಿಗೆ “ಯೋಗ ತರಭೇತಿ” ಮತ್ತು ಲಯನ್ ಕ್ಲಬ್ ಸಹಯೋಗದೊಂದಿಗೆ “ಉಚಿತ ವೈದ್ಯಕೀಯ ತಪಾಸಣೆ” ನಡೆಸುತ ಬಂದಿದೆ.
ಪ್ರತಿವರ್ಷ ವಾರ್ಷಿಕೋತ್ಸವದಲ್ಲಿ ಸಾವಿರಕ್ಕೂ ಜನರು ಪಾಲ್ಗೊಳ್ಳುವುದು ಸಂಘವು ಉದ್ದೇಶವನ್ನು ಸಫಲಗೊಳಿಸುವಲ್ಲಿ ಯಶಸ್ವಿಯಾಗಿದೆ.
ಇಲ್ಲಿಯವರಗೆ ಬಾಡಿಗೆ ಕೊಠಡಿಯಲ್ಲಿ ಸಂಘದ ವ್ಯವಹಾರಗಳನ್ನು ನಡೆಸುತಿತ್ತು. ಈ ನಿಟ್ಟಿನಲ್ಲಿ 09-08-16 ಲಯನ್ಸ್ ಕ್ಲಬ್ ನಲ್ಲಿ ನಡೆದ ಪ್ರಮುಖರ ಸಭೆಯಲ್ಲಿ ನಿರ್ಧರಿಸಿದಂತೆ ಸಂಘದ ಕಚೇರಿಗೆ ಯಲಹಂಕ ಉಪನಗರ ಐದನೇ ಹಂತದಲ್ಲಿರುವ, No.147, SMIG-A ಬ್ಲಾಕಲ್ಲಿರುವ ಫ್ಲ್ಯಾಟ್ ಖರೀದಿಸುವುದಾಗಿ ನಿರ್ಧರಿಸಲಾಯಿತು.ಪ್ರಧಾನ ದಾನಿಗಳಾಗಿ ಶ್ರೀಯುತ ಗೋವಿಂದೂರು ವೆಂಕಪ್ಪ ಹೆಗ್ಡೆ, ರೊನಾಲ್ಡೊ ಕೊಲಾಸೋ, ಹಾಗೂ ಸಂಘದ ಮಹಾ ದಾನಿಗಳಾಗಿ ಶ್ರೀಯುತರಾದ ಶೇಖರ ಪೂಜಾರಿ,ಸುಧಾಕರ ಶೆಟ್ಟಿ, ರಾಜ್ ಬಲ್ಲಾಳ್, ಮತ್ತು ಸಂಘದ ಪೂರ್ವ ಸಮಿತಿಯ ಸದಸ್ಯರುಗಳು, ಸಂಘದ ಸದಸ್ಯರಲ್ಲಿ ಶ್ರೀಯುತರಾದ ಕೆ ವಿಠಲ್ ಶೆಟ್ಟಿ,ಆನಂದ ಶೆಟ್ಟಿ, ಕೆ.ಲಕ್ಷ್ಮೀ ನಾರಾಯಣ ಆಳ್ವ ಪರೀಕ ಭಾಸ್ಕರ ಶೆಟ್ಟಿ,ದಯಾನಂದ.ಸಿ.ಕೋಟ್ಯಾನ್,ಗಂಗಾಧರ ಶೆಟ್ಟಿ, ಶಶಿಕಾಂತ ಕುಮಾರ್ ಶೆಟ್ಟಿ, ಬಿ. ಕೃಷ್ಣಕುಮಾರ ಹೆಗ್ಡೆ,ಸತೀಶ್ ಕಾಮತ, ಹರೀಶ ಶೆಟ್ಟಿ,ಶ್ರೀವರ್ಮಾ ಶೆಟ್ಟಿ, ಕಮಲಾಕ್ಷ ಶೆಟ್ಟಿ ಪ್ರಮುಖರಾಗಿದ್ದಾರೆ ಹಾಗು ಸಂಘದ ಪೂರ್ವ, ಪ್ರಸ್ತುತ ಸಮಿತಿಯ ಸದಸ್ಯರುಗಳು ಹಾಗು ಸದಸ್ಯರುಗಳು ತಮ್ಮ ಅಮೂಲ್ಯವಾದ ಕೊಡುಗೆಗಳನ್ನು ನೀಡಿದ್ದಾರೆ. ಇದರಿಂದ ಸಂಘಕ್ಕೆ ಫ್ಲಾಟ್ ಖರೀದಿಸಲು ಸಾಧ್ಯವಾಯಿತು. 22-12-2016ರಂದು “ದಕ್ಷಿಣ ಕನ್ನಡಿಗರ ಸಾಂಸ್ಕೃತಿಕ ಸಂಘ” ದ ಹೆಸರಲ್ಲಿ ನೋಂದಾಯಿಸಲಾಯಿತು.
ದಕ್ಷಿಣ ಕನ್ನಡಿಗರ ಸಾಂಸ್ಕೃತಿಕ ಸಂಘದ ವತಿಯಿಂದ ಉಚಿತ ಯಕ್ಷಗಾನ ತರಬೇತಿ “ಕರ್ನಾಟಕ ಕಲಾದರ್ಶಿನಿ” ದಿಗ್ದರ್ಶನದಲ್ಲಿ ನಡೆಯುತಿದೆ.
ಪ್ರಸ್ತುತ ವರ್ಷದ ಕ್ರೀಡಾಕೂಟವನ್ನು ದಿನಾಂಕ 18-12-2016 ರಂದು ಹೊಯ್ಸಳ ಮೈದಾನದಲ್ಲಿ ನಡೆಸಲಾಯಿತು.ಉದ್ಘಾಟಕರಾಗಿ ಶ್ರೀಯುತ ಎಂ.ಸತೀಶ್ (ಬ್ರಹತ್ ಬೆಂಗಳೂರು ಮಹಾನಗರಪಾಲಿಕೆ ಸದಸ್ಯರು), ಸಂಘದ ಪೋಷಕರಾದ ಶ್ರೀಯುತ ಗೋವಿಂದೂರು ವೆಂಕಪ್ಪ ಹೆಗ್ಡೆಯವರು, ಸುಧಾಕರ ಶೆಟ್ಟಿಯವರು,ಸಂಘದ ಪ್ರಸ್ತುತ ಅಧ್ಯಕ್ಷರಾದ ದಯಾನಂದ.ಸಿ.ಕೋಟ್ಯಾನ್, ಸಮಿತಿಯ ಸದಸ್ಯರುಗಳು, ಸಂಘದ ಪೂರ್ವ ಅಧ್ಯಕ್ಷರುಗಳು ಸಮಿತಿಯ ಸದಸ್ಯರುಗಳು,ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.
ಇಪ್ಪತ್ತನೇ ವಾರ್ಷಿಕೋತ್ಸವನ್ನು 08-01-2017ರಂದು ಬೆಳಿಗ್ಗೆ 9.30ಗಂಟೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರ್ಕಾರ ಇವರ ಸಹಯೋಗದೊಂದಿಗೆ ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜು ಸಭಾಂಗಣ, ಯಲಹಂಕ ಉಪನಗರ,ಬೆಂಗಳೂರು-64ರಲ್ಲಿ ನಡೆಸಲಾಯಿತು .ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀಯುತ ಗೋವಿಂದೂರು ವೆಂಕಪ್ಪ ಹೆಗ್ಡೆಯವರು (ಉದ್ಯಮಿಗಳು ಬೆಂಗಳೂರು), ಮುಖ್ಯ ಅತಿಥಿಗಳಾಗಿ ಬೊಳುವಾರು ಮಹಮದ್ ಕುಂಜ್ಞಿ (ಸಾಹಿತಿಗಳು ಬೆಂಗಳೂರು), ಸನ್ಮಾನ ಅತಿಥಿಯಾಗಿ ಶ್ರೀಮತಿ ಸತ್ಯಭಾಮ ಆರೂರು (ಖ್ಯಾತ ಹಿರಿಯ ಕನ್ನಡ ಚಲನಚಿತ್ರ ನಟಿ) ಉಪಸ್ಥಿತರಿದ್ದರು .ಸಂಘದ ಎಲ್ಲ ಸದಸ್ಯರು ಕುಟುಂಬ ಸಮೇತರಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು.
ಸಂಘದ ಸದಸ್ಯರು ಮತ್ತು ಮಕ್ಕಳಿಂದ 20ನೇ ವಾರ್ಷಿಕೋತ್ಸವದ ದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗು ತುಳು ಹಾಸ್ಯನಾಟಕ ಮತ್ತು ಯಕ್ಷಗಾನ ಪ್ರಧರ್ಶನ ಪ್ರಸಂಗ 1: ಚಕ್ರವ್ಯೂಹ (ಬಾಲ ಮತ್ತು ಪುರುಷ ಕಲಾವಿದರಿಂದ) ಪ್ರಸಂಗ 2: ಕೃಷ್ಣಾರ್ಜುನ ಕಾಳಗ (ಮಹಿಳಾ ಕಲಾವಿದರಿಂದ) ಆಯೋಜಿಸಲಾಯಿತು