ದಕ್ಷಿಣ ಕನ್ನಡಿಗರ ಸಾಂಸ್ಕೃತಿಕ ಸಂಘ ಯಲಹಂಕ ಬೆಂಗಳೂರು ಉದ್ಧೇಶಗಳು
ಅವಿಭಾಜ್ಯ ದಕ್ಷಿಣ ಕನ್ನಡ ಜಿಲ್ಲೆ ಪ್ರಸ್ತುತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನು ಒಳಗೊಂಡಿದೆ. ವಿಸ್ತೀರ್ಣದಲ್ಲಿ ಸಣ್ಣ ಪ್ರದೇಶವಾದರೂ ಭಾರತೀಯ ಕಲೆ ಮತ್ತು ಸಂಸ್ಕೃತಿಯ ವಿಷಯದಲ್ಲಿ ಸಾಹಿತ್ಯ, ನೃತ್ಯ, ತಿನಿಸು, ವಾಣಿಜ್ಯ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಅಪಾರವಾದ ಕೊಡಿಗೆಯನ್ನು ನೀಡಿದೆ. ಇಂತಹ ವೈವಿಧ್ಯತೆಯನ್ನು ಹೊಂದಿರುವ ಪ್ರದೇಶ ಭಾರತದ ಯಾವುದೇ ಪ್ರದೇಶದಲ್ಲಿ ಪ್ರಾಯಶಃ ಕಂಡುಬರುವುದಿಲ್ಲ.
ಅಂತಹ ಕೆಲವೊಂದು ಕಲಾಪ್ರಕಾರಗಳು ಯಕ್ಷಗಾನ, ಭೂತಕೋಲ, ಕಂಬಳ ಆಟ, ನಾಗಮಂಡಲ, ಡಕ್ಕೆಬಲಿ, ಹುಲಿವೇಷ, ಕೋಟಿಚೆನ್ನಯ್ಯ, ಬೊಂಬೆಯಾಟ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುತ್ತದೆ.
ಹಲವಾರು ಜಾತಿ, ಧರ್ಮ, ಭಾಷೆಗಳುಳ್ಳ ಜನರು ಇಷ್ಟು ಸಣ್ಣ ಪ್ರಾಂತ್ಯದಲ್ಲಿ ವಿಶ್ವಖ್ಯಾತಿಯ ಕಲಾಸಂಪನ್ನರು ಮತ್ತು ಅದನ್ನು ಬೆಳೆಸಿಕೊಂಡು ಬಂದಿರುತ್ತಾರೆ.
ಬಹುಮುಖ ಪ್ರತಿಭೆಗಳುಳ್ಳ ಇಲ್ಲಿನ ಜನರು ಉದ್ಯೋಗ, ವ್ಯಾಪಾರ, ಕಲೆ, ವಾಣಿಜ್ಯ, ವೈದ್ಯಕೀಯ ಮತ್ತು ತಾಂತ್ರಿಕ ಕ್ಷೇತ್ರಗಳಲ್ಲಿ ಬೇರೆ ಬೇರೆ ಊರುಗಳಿಗೆ ಬಂದು ನೆಲೆಸಿರುತ್ತಾರೆ.
ಹಾಗೆಯೇ ಯಲಹಂಕದ ಸುತ್ತಮುತ್ತ ನೆಲೆಸಿರುವ ನಾವೆಲ್ಲಾ ನಾಗರೀಕರು ಸೇರಿ ನಮ್ಮ ಪ್ರಾಂತ್ಯದ ಕಲಾ ಪ್ರಕಾರಗಳನ್ನು ನೆರೆ ಹೊರೆಯ ಸಮಾಜದವರಿಗೂ ಮತ್ತು ನಮ್ಮ ಮುಂದಿನ ಪೀಳಿಗೆಗೆ ಇವುಗಳನ್ನು ಉಳಿಸಿ ಬೆಳೆಸಿ ಮತ್ತಷ್ಟು ಉಜ್ವಲವಾಗಿ ದೇಶದ ಎಲ್ಲೆಡೆಗೂ ಪಸರಿಸಲು ಮತ್ತು ಅಭಿವೃದ್ಧಿ ಪಡಿಸುವುದಕ್ಕಾಗಿ ದಕ್ಷಿಣ ಕನ್ನಡಿಗರ ಸಾಂಸ್ಕೃತಿಕ ಸಂಘವನ್ನು ಸ್ಥಾಪಿಸಲಾಯಿತು.ಈ ಸಂಘವು ಯಾವುದೇ ಲಾಭದ ಆಸಕ್ತಿಯನ್ನು ಹೊಂದಿರದ, ಸೇವಾ ಮನೋಭಾವನೆಯಂದ ಮಾತ್ರ ನಡೆಸಲ್ಪಡುತ್ತದೆ. ಕೇವಲ 100 ರೂಪಾಯಿಗಳನ್ನು ನೀಡಿ ಸದಸ್ಯತ್ವವನ್ನು ಪಡೆಯಬಹುದು